ನನ್ನ ಕನಸು, ಕಲ್ಪನೆ, ಅನುಭವ, ಹಾಗೂ ತವಕ ತಲ್ಲಣಗಳನ್ನು ಹಂಚಿಕೊಳ್ಳಲು ಈ ಬ್ಲಾಗ್ ಲೋಕಕ್ಕೆ ಬಂದಿರುವೆ. ಇತ್ತೀಚಿಗಷ್ಟೇ ಕರ್ನಾಟಕದ ಗಂಟಿಚೋರರ ಕುರಿತು ಪಿ ಎಚ್. ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ನಾನು ಸಂಶೋಧನಾ ಕ್ಷೇತ್ರದ ಅನುಭವಗಳಿಂದ ಬದುಕಿನ ಹೊಸ ದಿಗಂತದ ಅನ್ವೇಷಣೆಯಲ್ಲಿದ್ದೇನೆ. ಆಸಕ್ತರು ಆಗಾಗ ತಮ್ಮ ಅನುಭವದ ಬುತ್ತಿಯನ್ನು ನನ್ನೊಂದಿಗೆ ಸವಿಯಬಹುದು....ಬದುಕಿನ ದಾರಿಯಲಿ ಸಾಗುವಾಗ ಒಂದಿಷ್ಟು ಸುಖ ಇನ್ನೊಂದಿಷ್ಟು
ದುಃಖ ಹಂಚಿಕೊಳ್ಳುತ್ತ .... ನಿಮ್ಮೊಂದಿಗೆ ಹೆಜ್ಜೆ ಹಾಕುವೆ. ನೀವು ಬರೆಯಿರಿ ...ನಮ್ಮೊಂದಿಗೆ ಬೆರೆಯಿರಿ.
- ರಾಮಚಂದ್ರ